ಕಾದ ಕಬ್ಬುನವ ಕಾಯದ ಕಬ್ಬುನದಲ್ಲಿ ಹಿಡಿದು,
ಅಡಿಯಲ್ಲಿಯೂ ತಾನಾಗಿ, ಮೇಲೆತ್ತಿ ಹೊಡೆವುದೂ ತಾನಾಗಿ,
ಹಿಡಿವುದೂ ತಾನಾಗಿ, ಮೂರರ ಭೇದದಿಂದ ತನ್ನಂಗಕ್ಕೆ ತಾನಂಜಿ,
ಅವರ ಚಿತ್ತದ ಬಿನ್ನಾಣಕ್ಕೆ ಬಂದ ತೆರ, ಲಿಂಗಮಯ.
ಸರ್ವಾಂಗದಲ್ಲಿ ನಿಂದು, ಚಿತ್ತದ ಗೊತ್ತಿಗೆ ಸಿಕ್ಕಿ,
ಅವರಿಚ್ಚೆಯಲ್ಲಿ ತನ್ಮಯನಾದೆಯಲ್ಲಾ,
ಸದಾಶಿವಮೂರ್ತಿಲಿಂಗವೆ ತಾನು ತಾನಾದ ಕಾರಣ.
Art
Manuscript
Music
Courtesy:
Transliteration
Kāda kabbunava kāyada kabbunadalli hiḍidu,
aḍiyalliyū tānāgi, mēletti hoḍevudū tānāgi,
hiḍivudū tānāgi, mūrara bhēdadinda tannaṅgakke tānan̄ji,
avara cittada binnāṇakke banda tera, liṅgamaya.
Sarvāṅgadalli nindu, cittada gottige sikki,
avaricceyalli tanmayanādeyallā,
sadāśivamūrtiliṅgave tānu tānāda kāraṇa.