Index   ವಚನ - 180    Search  
 
ಮೂವರ ಹಂಗಿಂದ ಬಂದುದು ಲಿಂಗವಲ್ಲಾ ಎಂದು, ಸರ್ವಭವದಲ್ಲಿ ಬಂದ ಆತ್ಮ ವಸ್ತುವಲ್ಲಾ ಎಂದು, ಮತ್ತಿನ್ನೇನನರಿವಿರಣ್ಣಾ? ಭಾವ ಬಯಲೆಂದಲ್ಲಿ, ಕುರುಹು ಶಿಲೆಯೆಂದಲ್ಲಿ, ಸಿಕ್ಕಿತ್ತು ಮನ ಸಂಕಲ್ಪದಲ್ಲಿ, ಸದಾಶಿವಮೂರ್ತಿಲಿಂಗವನರಿವ ಬಟ್ಟೆಯ ಕಾಣೆ.