Index   ವಚನ - 193    Search  
 
ಹರಿವ ಹಾವಿಂಗೆ ಕಾಲ ಕೊಟ್ಟು, ಉರಿವ ಕಿಚ್ಚಿಗೆ ಕಯ್ಯನಿಕ್ಕಿ, ಅರಿವ ಆಯುಧಕ್ಕೆ ಕೊರಳ ಕೊಟ್ಟು, ಮತ್ತೆಂತೊ, ಅರುಹಿರಿಯರಾದಿರಿ? ಮುಂದಕ್ಕಾತನನರಿಯಬಲ್ಲಡೆ, ಹರಿವ ಚಿತ್ತವ ನಿಲಿಸಿ ಕುದಿವ ಆಸೆಯ ಕೆಡಿಸಿ, ಸರ್ವವ್ಯಾಪಾರವೆಂಬ ಗೊತ್ತಿಗೆ ಚಿತ್ತವನಿಕ್ಕದೆ ನಿಶ್ಚಯನಾಗಿ ನಿಂದುದು ಆತನಿರವೆ ಸದಾಶಿವಮೂರ್ತಿಲಿಂಗವು ತಾನೆ.