ಹುಲ್ಲು ಕೆಂಡವ ಮುಟ್ಟಿ ಹೊತ್ತದ ಪರಿಯ ನೋಡಾ,
ಹಸಿದ ಸರ್ಪನ ಹೆಡೆಯ ನೆಳಲಲ್ಲಿ ಮಂಡೂಕ ನಿಂದ ತೆರನ ನೋಡಾ.
ಜೀವ ಪರಮನಲ್ಲಿ ಬಂದುನಿಂದು ಒಂದಾಗದ ಸಂದೇಹವ ನೋಡಾ.
ಇಂತೀ ಸಂದನರಿದಲ್ಲದೆ ಅಂಗ-ಲಿಂಗ ಪ್ರಾಣ-
ಪರಮವೊಂದಾಗಲಿಲ್ಲ, ಸದಾಶಿವಮೂರ್ತಿಲಿಂಗವನರಿವುದಕ್ಕೆ.
Art
Manuscript
Music
Courtesy:
Transliteration
Hullu keṇḍava muṭṭi hottada pariya nōḍā,
hasida sarpana heḍeya neḷalalli maṇḍūka ninda terana nōḍā.
Jīva paramanalli bandunindu ondāgada sandēhava nōḍā.
Intī sandanaridallade aṅga-liṅga prāṇa-
paramavondāgalilla, sadāśivamūrtiliṅgavanarivudakke.