Index   ವಚನ - 228    Search  
 
ಜಲದೊಳಗಳ ಮತ್ಸ್ಯದ ನೆಲೆಯ, ಮುಗಿಲೊಳಗಳ ಮಿಂಚಿನ ನೆಲೆಯ, ವಾರಿಯ ಸರಲೆಕ್ಕವ ಭೇದಿಸಬಹುದೆ? ಆ ತೆರದಲ್ಲಿ ನಿಂದಾತ್ಮನ ಒದಗನರಿವ ಭೇದವೆಂತುಟಯ್ಯಾ? ವಾಯು ಬಯಲಲ್ಲಿ ಅಡಗಿ ಆವ ಠಾವಿನಲ್ಲಿ ಬೀಸಿದಡೆ ಕಲೆದೋರುವಂತೆ, ಆತ್ಮನ ಭೇದವ ಭೇದಿಸುವ ಪರಿ ತನ್ನನರಿತಲ್ಲದಾಗದು, ಸದಾಶಿವಮೂರ್ತಿಲಿಂಗವನರಿವುದಕ್ಕೆ.