Index   ವಚನ - 244    Search  
 
ಚಿತ್ತ ನೆನೆದು ವಸ್ತುವೆಂದು ಪ್ರಮಾಳಿಸುವಲ್ಲಿ ವಸ್ತುವಿಗೂ ಚಿತ್ತಕ್ಕೂ ಬಿಟ್ಟಿಹ ಠಾವಾವುದಯ್ಯಾ? ಉರಿಕಾಷ್ಠದ ಇರವಿನಂತೆ, ಒಡಲಿಂಗೆ ಎಡೆಯಿಲ್ಲ. ಸದಾಶಿವಮೂರ್ತಿಲಿಂಗಕ್ಕೆ ಉಭಯ ನಾಮವಿಲ್ಲ.