ಕೆಚ್ಚಲೊಳಗೆ ಕ್ಷೀರವಿಪ್ಪಂತೆ ಚಿತ್ತದೊಳಗೆ
ವಸ್ತುವಿಪ್ಪ ಭೇದವನರಿಯಬೇಕು.
ಕೆಚ್ಚಲ ಹೆರೆ ಹಿಂಗಿಯಲ್ಲದೆ ಹಾಲಿಗೊಪ್ಪವಿಲ್ಲ.
ಚಿತ್ತದ ಕಲೆಯ ಬಿಟ್ಟು ವಸ್ತುಮಯ ತಾನಾಗಿ
ಉಭಯ ರೂಪಿನಲ್ಲಿ ಅಡಗಿದ ವಸ್ತುವ ಹೆರೆ ಹಿಂಗಿದಲ್ಲಿ
ಸದಾಶಿವಮೂರ್ತಿಲಿಂಗವನರಿತುದು.
Art
Manuscript
Music
Courtesy:
Transliteration
Keccaloḷage kṣīravippante cittadoḷage
vastuvippa bhēdavanariyabēku.
Keccala here hiṅgiyallade hāligoppavilla.
Cittada kaleya biṭṭu vastumaya tānāgi
ubhaya rūpinalli aḍagida vastuva here hiṅgidalli
sadāśivamūrtiliṅgavanaritudu.