ಶರೀರ ದಹನ ಮುಖವೆಲ್ಲವು ರುದ್ರತತ್ವ ಆಧೀನವಾಗಿಹುದು.
ಶರೀರಮುಖ ಸಮಾಧಿ ಆಧೀನವಾಗಿಹುದೆಲ್ಲವು ವಿಷ್ಣುಪಕ್ಷವಾಗಿಹವು.
ಇಂತೀ ಉಭಯ ಲಯವನರಿತಲ್ಲಿ ಪೂರ್ವಕಕ್ಷೆಯಾಗಿಹುದು.
ಇಂತೀ ಉಭಯವ ಮರೆಯಲ್ಲಿ ಉತ್ತರಕಕ್ಷೆಯಾಗಿಹುದು.
ಇಂತೀ ಭೇದಂಗಳನರಿತು ಹೊರಗಾಗಿ ನಿಂದಲ್ಲಿ
ಸದಾಶಿವಮೂರ್ತಿಲಿಂಗದ ಅರಿವು ಒಳಗಾಗಿಹುದು.
Art
Manuscript
Music
Courtesy:
Transliteration
Śarīra dahana mukhavellavu rudratatva ādhīnavāgihudu.
Śarīramukha samādhi ādhīnavāgihudellavu viṣṇupakṣavāgihavu.
Intī ubhaya layavanaritalli pūrvakakṣeyāgihudu.
Intī ubhayava mareyalli uttarakakṣeyāgihudu.
Intī bhēdaṅgaḷanaritu horagāgi nindalli
sadāśivamūrtiliṅgada arivu oḷagāgihudu.