Index   ವಚನ - 258    Search  
 
ವಿಷ್ಣು ದೈವವೆಂದಡೆ ಪಾಂಡವರ ಬಂಡಿಯ ಬೋವನಾದ, ಬ್ರಹ್ಮದೈವವೆಂದಡೆ ಆ ಬೋವಂಗೆ ಕಂದನಾದ, ಜಿನ ದೈವವೆಂದಡೆ ಆ ಬೋವನ ಅವತಾರವಾದ, ಮುಪ್ಪುರವ ಕೆಡಿಸುವಲ್ಲಿ ಕುಟ್ಟಿಲ ಭೌದ್ಧನಾದ, ರುದ್ರ ದೈವವೆಂದಡೆ ಅರ್ಧನಾರಿಗೆ ಸಿಕ್ಕಿದ. ಇಂತೀ ಸಮಯ ಕುಲಕ್ಕೆ ಹೊರಗಾಗಿ, ಶಕ್ತಿ ಸಮಯ ನಿರಸನವಾಗಿ ನಿಂದುದು ಸದಾಶಿವಮೂರ್ತಿಲಿಂಗವೊಂದಲ್ಲದಿಲ್ಲಾ ಎಂದೆ.