Index   ವಚನ - 264    Search  
 
ವೇದವನೋದಿದಲ್ಲಿ ಪ್ರಣವವನರಿಯಬೇಕು. ಶಾಸ್ತ್ರವ ಹೇಳಿದಲ್ಲಿ ಸಂಚಿತ ಕರ್ಮವನರಿಯಬೇಕು. ಪುರಾಣವನೋದಿದಲ್ಲಿ ಪುಣ್ಯತಮಭೇದಂಗಳಲ್ಲಿ ಸನ್ನದ್ಧವ ತಿಳಿಯಬೇಕು. ಪನ್ನಗಫಲದಂತಾಗದೆ ಉಭಯಶುದ್ಧವಾಗಿರಬೇಕು, ಸದಾಶಿವಮೂರ್ತಿಲಿಂಗವನರಿವುದಕ್ಕೆ.