Index   ವಚನ - 276    Search  
 
ರಾಜಸ ತಾಮಸ ಸಾತ್ವಿಕವನರಿದು ಪೂಜಿಸಿಕೊಂಬುದು ಗುರುಚರದ ಇರವು. ಕೊಟ್ಟಿಹರೆಂದು ಬೇಡದೆ, ಇಕ್ಕಿಹರೆಂದು ಉಣ್ಣದೆ, ಭಕ್ತನಲ್ಲಿ ಅರಿದು ಬಂದುದ ಅನುಕರಿಸಿ, ಮರವೆಯಿಂದ ಬಂದುದ ತೆರದರಿಸಿನವ ಮಾಡಿ, ಉಭಯಕ್ಕೆ ಕೇಡಿಲ್ಲದಂತೆ ಇಪ್ಪುದು ಗುರುಚರದ ಇರವು, ಸದಾಶಿವಮೂರ್ತಿಲಿಂಗದ ಅರಿವು.