Index   ವಚನ - 278    Search  
 
ಗುರುವಿನ ಉಪಾಧಿಕೆಯ ಶಿಷ್ಯನರಿತಲ್ಲಿ ಆ ಗುರುವಿಂಗೆ ಹೇಳದೆ ಸುಮ್ಮನಿದ್ದಲ್ಲಿ ಗುರುದ್ರೋಹ ತನಗಾಯಿತ್ತು. ಹೇಳಿದ ಮಾತ ಕೇಳಿ ಆ ಸ್ಥಲಕ್ಕೆ ಭಿನ್ನಭಾವಿಯಾಗಲಾಗಿ, ಲಿಂಗಜಂಗಮದ ದ್ರೋಹ ಆ ಗುರುವಿಂಗಾಯಿತ್ತು. ಆ ಭಕ್ತಂಗೆ ಚಿತ್ತ ಮುಟ್ಟಿದಲ್ಲಿ ಗುರುವೆಂದು ಪ್ರಮಾಳಿಸಲಿಲ್ಲ. ಪ್ರಮಾಳಿಸದಿದ್ದಲ್ಲಿ ಆಚರಣೆಯ ತೊಡಕು. ಇಂತೀ ಉಭಯದ ಏರಿನಲ್ಲಿ ನೋವುತ್ತಿದೇನೆ? ಭಾವದ ಭ್ರಮೆಯ ಬಿಡಿಸು, ಸದಾಶಿವಮೂರ್ತಿಲಿಂಗವೆ.