ದಾತ ಗುಣ ವರ್ತಕ ಮಾಟ,
ಅರಿವ ಗುಣ ವಿಚಾರ ಮಾಟ.
ಇಂತೀ ದ್ವಯವನರಿತು,
ಕ್ರೀಗೆ ಪದವಾಗಿ ಅರಿವಿಂಗೆ
ಆಶ್ರಯವಾಗಿ ಮಾಡುವ ಭಕ್ತನ ಅಂಗ
ಸದಾಶಿವಮೂರ್ತಿಲಿಂಗವು ತಾನೆ.
Art
Manuscript
Music
Courtesy:
Transliteration
Dāta guṇa vartaka māṭa,
ariva guṇa vicāra māṭa.
Intī dvayavanaritu,
krīge padavāgi ariviṅge
āśrayavāgi māḍuva bhaktana aṅga
sadāśivamūrtiliṅgavu tāne.