ಸಕಲಬ್ರಹ್ಮಾಂಡ ವಿಷ್ಣುಮಯ,
ಉಭಯದ ಆತ್ಮಮಯ ಮಹಾಪ್ರಳಯ,
ಕಾಲಾಂತಕ ರುದ್ರನು ಅನಾದಿವಸ್ತುವ ಅಂಶೀಭೂತವಾಗಿ,
ತ್ರಿವಿಧಮಾರ್ಗಂಗಳಲ್ಲಿ ಜಗದ ಆಗುಚೇಗೆಯನರಿವುದಕ್ಕೆ
ಸದಾಶಿವಮೂರ್ತಿ ಉಮಾಪತಿಯಾದ ಗುಣ ವಿವರ:
ಭಕ್ತಿಭಾವದೇಹಿಕನಾಗಿ ಸಚ್ಚಿದಾನಂದ ನಿಃಕಲಬ್ರಹ್ಮಮೂರ್ತಿ
ಸದಾಶಿವಮೂರ್ತಿಯಲ್ಲದಿಲ್ಲ.
Art
Manuscript
Music
Courtesy:
Transliteration
Sakalabrahmāṇḍa viṣṇumaya,
ubhayada ātmamaya mahāpraḷaya,
kālāntaka rudranu anādivastuva anśībhūtavāgi,
trividhamārgaṅgaḷalli jagada āgucēgeyanarivudakke
sadāśivamūrti umāpatiyāda guṇa vivara:
Bhaktibhāvadēhikanāgi saccidānanda niḥkalabrahmamūrti
sadāśivamūrtiyalladilla.