ಅನಾದಿಯಿಂದತ್ತಲಾದ ಅಂತರಾದಿಮಧ್ಯದಲ್ಲಿ,
ನಿಜಸ್ವರೂಪ ನಿಃಕಲ[ವಸ್ತು ಜಗಲೀ]ಲಾಭಾವಿಯಾಗಿ
ತ್ರಿಗುಣಾತ್ಮಕವಾದ ಭೇದಪೂರ್ವಕ ಮುಂತಾದ
ಷಡ್ದರ್ಶನದಲ್ಲಿ ವಿವರಂಗಳಿಗೆ,
ಶೈವ ವೈಷ್ಣವ ಉಭಯಂಗಳಲ್ಲಿ ಶೈ[ವರಾರು], ವೈಷ್ಣವರಾರು,
ಇಂತೀ ಉಭಯರಲ್ಲಿ ಅಡಗುವ ಗುಣ ವಿವರ:
ಶೈವಕ್ಕೆ ಮೂರು, ವೈಷ್ಣವಕ್ಕೆ ಮೂರು,
ಉಭಯನಾಮ ಕುಲಲಯ[ವಹಲ್ಲಿ]
ಶೈವಕ್ಕೆ ದಹನ, ವೈಷ್ಣವಕ್ಕೆ ಸಮಾಧಿ,
ಶರೀರದಹನ ಮುಖವೆಲ್ಲವೂ ರುದ್ರತತ್ವಾಧೀನವಾಗಿಹುದು.
ಶರೀರ ಮುಖ ಸಮಾ(ಧಿ ಆಧೀನ)ವಾಗಿಹುದೆಲ್ಲವೂ ವಿಷ್ಣುಪಕ್ಷವಾಗಿಹುದು.
ಇಂತೀ ಉಭಯಲಯವನರಿತಲ್ಲಿ ಪೂರ್ವಕಕ್ಷೆಯಾಗಿಹುದು.
ಇಂತೀ ಉಭಯವ ಮರೆತಲ್ಲಿ ಉತ್ತ[ರಕಕ್ಷೆಯಾಗಿ]ಹುದು.
ಇಂತೀ ಭೇದಂಗಳರಿತು ಹೊರಗಾಗಿ ನಿಂದಲ್ಲಿ,
ಸದಾಶಿವಮೂರ್ತಿಲಿಂಗದರಿವು ಒಳಗಾಯಿತ್ತಾಗಿಹುದು.
Art
Manuscript
Music
Courtesy:
Transliteration
Anādiyindattalāda antarādimadhyadalli,
nijasvarūpa niḥkala[vastu jagalī]lābhāviyāgi
triguṇātmakavāda bhēdapūrvaka muntāda
ṣaḍdarśanadalli vivaraṅgaḷige,
śaiva vaiṣṇava ubhayaṅgaḷalli śai[varāru], vaiṣṇavarāru,
intī ubhayaralli aḍaguva guṇa vivara:
Śaivakke mūru, vaiṣṇavakke mūru,
ubhayanāma kulalaya[vahalli]
Śaivakke dahana, vaiṣṇavakke samādhi,
śarīradahana mukhavellavū rudratatvādhīnavāgihudu.
Śarīra mukha samā(dhi ādhīna)vāgihudellavū viṣṇupakṣavāgihudu.
Intī ubhayalayavanaritalli pūrvakakṣeyāgihudu.
Intī ubhayava maretalli utta[rakakṣeyāgi]hudu.
Intī bhēdaṅgaḷaritu horagāgi nindalli,
sadāśivamūrtiliṅgadarivu oḷagāyittāgihudu.