ಅಂಗೈಯದು ಹೆಂಗಳಾಗಿ,
ನೋಡುವ ಕಂಗಳು ಪುರುಷನಾಗಿ
ಉಭಯವನರಿವುದು, ಪ್ರಜಾಪತಿಯಾಗಿ.
ಚಿದ್ಘನಶಕ್ತಿ ಯೋನಿಯಲ್ಲಿ ಕೂಡಿ,
ಬಿಂದು ವಿಸರ್ಜನವಾಯಿತ್ತು.
ಅದು ಲೀಯವಾಗಲ್ಪಟ್ಟುದು ಲಿಂಗವಾಯಿತ್ತು.
ಅದು ಅಂಗೈಯಲ್ಲಿ ಅರಿಕೆ, ಕಂಗಳಿಂಗೆ ಕುರುಹು.
ಮಂಗಳಮಯ ಅರ್ಕೇಶ್ವರಲಿಂಗವನರಿವುದಕ್ಕೆ ಇಷ್ಟದ ಗೊತ್ತೆ ?
ಅರ್ಕೇಶ್ವರಲಿಂಗವು ತಾನು ತಾನೆ.
Art
Manuscript
Music
Courtesy:
Transliteration
Aṅgaiyadu heṅgaḷāgi,
nōḍuva kaṅgaḷu puruṣanāgi
ubhayavanarivudu, prajāpatiyāgi.
Cidghanaśakti yōniyalli kūḍi,
bindu visarjanavāyittu.
Adu līyavāgalpaṭṭudu liṅgavāyittu.
Adu aṅgaiyalli arike, kaṅgaḷiṅge kuruhu.
Maṅgaḷamaya arkēśvaraliṅgavanarivudakke iṣṭada gotte?
Arkēśvaraliṅgavu tānu tāne.