Index   ವಚನ - 6    Search  
 
ಅರಿದು ಲಿಂಗಸಂಗವಾದಲ್ಲಿ ಕಾಯವಳಿದರೇನು ? ಕಾಯವುಳಿದು ಕೈಲಾಸಕ್ಕೆ ಹೋಗಬೇಕೆಂಬುದು, ಜೀವನ ಉಪಾಧಿಕೆ. ಘಟಮಟಪಟನ್ಯಾಯ ಇವೆಲ್ಲವು ಬಯಲೊಳಗು. ಅರ್ಕೇಶ್ವರಲಿಂಗವನರಿದು ಕೂಡಿದ ಮತ್ತೆ, ಅಂಗ ಸಿಕ್ಕುವುದಕ್ಕೆ ಠಾವಿಲ್ಲ.