Index   ವಚನ - 87    Search  
 
ಮೂರುಲೋಕದ ದೈತೆ ಊರೆಲ್ಲರ ಕೊಂದು ತಿಂದು, ಬೇರೊಂದು ಠಾವಿನಲ್ಲಿ ಅಯಿದಾಳೆ. ಠಾವನರಿತು ದೈತೆಯ ದಾತ ಮುರಿದು, ಅನಿಹಿತವ ನೇತಿಗಳೆದು, ನಿಹಿತವು ತಾನಾದಡೆ, ಅರ್ಕೇಶ್ವರಲಿಂಗವ ಕೂಡಿದ ಕೂಟ.