Index   ವಚನ - 21    Search  
 
ಉಟ್ಟುದ ಹೊದ್ದುದ ಬಿಟ್ಟು ಬಂದು, ಮತ್ತೊಬ್ಬರ ಅಂಗಳದ ಬಟ್ಟೆಯ ಕಾಯಲೇತಕ್ಕೆ? ದೃಷ್ಟದ ವಸ್ತುವಿದೆಯೆಂದು ಮಿಕ್ಕಾದವರಿಗೆ ಹೇಳುತ್ತ, ತ್ರಿವಿಧಬಟ್ಟೆಯ ತಾ ಕಾವುತ್ತ, ಈ ಕಷ್ಟರ ಕಾಬುದಕ್ಕೆ ಮೊದಲೆ ಮನಸಂದಿತ್ತು ಮಾರೇಶ್ವರಾ.