Index   ವಚನ - 31    Search  
 
ಕರ್ಮವ ನೇತಿಗಳೆದು ನಿಂದಲ್ಲಿ, ವರ್ಮವ ವಿಚಾರಿಸಲಿಲ್ಲ. ಕರ್ಮ ವರ್ಮವೆಂಬ ಉಭಯದ ಸಂದಣಿಯಲ್ಲಿ ಹೋರಟೆಗೊಳ್ಳದ ಮುನ್ನವೆ, ಮನಸಂದಿತ್ತು ಮಾರೇಶ್ವರಾ.