Index   ವಚನ - 38    Search  
 
ಕಾಯ ದಿಟವೆಂದು ಪ್ರಮಾಣಿಸುವಲ್ಲಿ ಅಳಿವುದಕ್ಕೆ ಮುಖ್ಯ. ಜೀವ ದಿಟವೆಂದು ಪ್ರಮಾಣಿಸುವಲ್ಲಿ ಪ್ರಕೃತಿರೂಪು. ಅರಿವು ದಿಟವೆಂದು ಪ್ರಮಾಣಿಸುವಲ್ಲಿ ಮರವೆಗೆ ಬೀಜ. ಸ್ಥೂಲದ ಅಳಿವನರಿತು, ಸೂಕ್ಷ್ಮದ ಪ್ರಕೃತಿಯನರಿತು, ಕಾರಣದ ಅರಿವು ಮರವೆಯನರಿತು, ತ್ರಿಗುಣ ಭೇದಂಗಳ, ತ್ರಿಶಕ್ತಿ ಭಾವಂಗಳ, ತ್ರಿಗುಣಮಲಕ್ಕೆ ಒಳಗಾಗದ ಮುನ್ನವೆ ಮನಸಂದಿತ್ತು ಮಾರಿತಂದೆ.