Index   ವಚನ - 49    Search  
 
ಕೂಲಿಗೆ ಹಾವ ಕಚ್ಚಿಸಿಕೊಂಡು ಸಾಯಲೇತಕ್ಕೆ ? ಕಂಡವರ ಬೇಡಿ ಜಂಗಮಕ್ಕೆ ಮಾಡಿಹೆನೆಂಬ ದಂದುಗವೇಕೆ ? ಲಂದಣಗಿತ್ತಿಯಂತೆ ಸಾವ ಘಟದಂದವ ಹೊರಲೇತಕ್ಕೆ ? ಈ ದಂದುಗಕ್ಕೆ ಮೊದಲೆ ಅಂಜಿ, ಅರಿದು ಮನಸಂದಿತ್ತು ಮಾರೇಶ್ವರಾ.