ಖ್ಯಾತಿಲಾಭದ ಪೂಜೆ, ದ್ರವ್ಯವ ಕೆಡಿಸುವುದಕ್ಕೆ ಮೊದಲಾಯಿತ್ತು.
ವೈರಾಗ್ಯದ ವಿರಕ್ತಿ ಮೂರಕ್ಕೆ ಒಡಲುಗೊಳಿಸಿತ್ತು.
ವಾಗದ್ವೈತದ ಕೇಣಸರ, ಗೆಲ್ಲ ಸೋಲಕ್ಕೆ ಕಲ್ಲೆದೆಯ ಮಾಡಿತ್ತು.
ಇವೆಲ್ಲವ ತಿಳಿದು, ಇಲ್ಲ ಉಂಟು ಎಂಬಲ್ಲಿಯೆ,
ಮನಸಂದಿತ್ತು ಮಾರೇಶ್ವರಾ.
Art
Manuscript
Music
Courtesy:
Transliteration
Khyātilābhada pūje, dravyava keḍisuvudakke modalāyittu.
Vairāgyada virakti mūrakke oḍalugoḷisittu.
Vāgadvaitada kēṇasara, gella sōlakke kalledeya māḍittu.
Ivellava tiḷidu, illa uṇṭu emballiye,
manasandittu mārēśvarā.