Index   ವಚನ - 54    Search  
 
ಗರಳವ ಬೈಚಿಟ್ಟುಕೊಂಡಿಪ್ಪ ಉರಗನಂತೆ, ಫಲವನಿಂಬಿಟ್ಟುಕೊಂಡಿಹ ತರುವಿನಂತೆ, ನಿಧಾನವ ಮರೆಸಿಕೊಂಡಿಪ್ಪ ಧರೆಯಂತೆ, ಗಂಧವನಿಂಬಿಟ್ಟ ಚಂದನದಂತೆ ಇವರಂಗವಾವ ತೆರದಲ್ಲಿ ನಿಂದಿತ್ತು? ಸಂಗ ದುಸ್ಸಂಗವನರಿದು ಸಲೆ ಸಂದುದು, ನಿಂದುದು, ಮನಸಂದುದು ಮಾರೇಶ್ವರಾ.