Index   ವಚನ - 98    Search  
 
ಹರಿವ ಗರಗಸವೊಂದೆಬಗೆಯಲ್ಲಿ ಹರಿವುದೆ ? ಉಭಯದ ಕೊಯಿತೆ ಶರಣರ ಸಂಗ. ಅರಿಬಿರಿದಿನ ತೊಡಕು. ಉತ್ತರ ಕೊಟ್ಟಲ್ಲಿ ಭಕ್ತಿ ನಿಂದಿತ್ತು. ಗೆಲ್ಲ ಸೋಲಕ್ಕೆ ನಾ ನುಡಿದು ಗೆದ್ದೆಹೆನೆಂದಡೆ, ಹಿಡಿದ ನೇಮಕ್ಕೆ ಅದೇ ಕಡೆ. ಸತಿಪತಿಯಾಗಬಹುದೆ ? ಏನೆಂದಲ್ಲಿ ನಾನೆಂಬುದಳಿದಲ್ಲಿ,ಮನಸಂದಿತ್ತು ಮಾರೇಶ್ವರಾ.