ಬಾಯಲ್ಲಿ ಬಸುರು ಹುಟ್ಟಿ, ಕಿವಿ ಬೆಸನಾಯಿತ್ತು.
ಕಣ್ಣಿನಲ್ಲಿ ಮೊಲೆ ಹುಟ್ಟಿ, ನಾಸಿಕದಲ್ಲಿ ಹಾಲು ಬಂದಿತ್ತು.
ತಲೆಯ ಹಣೆಯ ಮೇಲೆ ಕುಳಿತು ಕೂಸು ಉಣ್ಣುತ್ತಿರಲಾಗಿ
ಆಕಾಶದ ಬಿಜ್ಜ ಹೊಯಿದೆತ್ತಿತ್ತು.
ಆ ಶಿಶುವನೆತ್ತಿ ಕೊಕ್ಕಿನಲ್ಲಿ ತಿವಿಯಲಾಗಿ, ತಪ್ಪದೆ ನುಂಗಿತ್ತು.
ಆ ಬಿಜ್ಜು ಹೊಟ್ಟೆಗೆಯ್ದದೆ ಅಪ್ಪ ಅವ್ವೆ ಎನ್ನುತ್ತಿದ್ದಿತ್ತು.
ಇದು ದೃಷ್ಟ, ಸೋಜಿಗ.
ಗೂಡಿನೊಡೆಯ ಗುಮ್ಮಟನಾಥನ
ಅಗಮ್ಯೇಶ್ವರಲಿಂಗ ಅಪ್ರಮಾಣು.