ಕೈ ಗರ್ಭವಾಗಿ ನವಮಾಸ ತುಂಬಿತ್ತು. ಕಂಗಳಲ್ಲಿ ಬೆಸನಾಯಿತ್ತು.
ಬೆನ್ನಿನಲ್ಲಿ ಮೊಲೆ ಹುಟ್ಟಿ,
ನಡುನೆತ್ತಿಯಲ್ಲಿ ಹಾಲು ಬಂದಿತ್ತು.
ನಾಲಗೆಯಿಲ್ಲದ ಶಿಶುವಿಂಗೆ ಹಾಲು ಎಯ್ದದೆ ಬಾಯ ಬಿಡುತ್ತಿದ್ದಿತ್ತು.
ಗೂಡಿನ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗವ
ಗರ್ಭೀಕರಿ[ಸೆನೆಂ]ದು.
Art
Manuscript
Music
Courtesy:
Transliteration
Kai garbhavāgi navamāsa tumbittu. Kaṅgaḷalli besanāyittu.
Benninalli mole huṭṭi,
naḍunettiyalli hālu bandittu.
Nālageyillada śiśuviṅge hālu eydade bāya biḍuttiddittu.
Gūḍina gum'maṭanoḍeya agamyēśvaraliṅgava
garbhīkari[seneṁ]du.