Index   ವಚನ - 46    Search  
 
ಕಾಯಸೂತಕವಳಿದು ಜೀವದ ಭವ ಹಿಂಗಿ, ಜ್ಞಾನಗುರು ಕೊಟ್ಟ ಭಾವದ ಲಿಂಗವಿರೆ, ಮತ್ತೇನನು ನೋಡಲೇಕೆ? ಗಂಡನುಳ್ಳವಳಿಗೆ ಮತ್ತೊಬ್ಬ ಬಂದಡೆ ಚಂದವುಂಟೆ? ಅದರಂಗ ನಿಮಗಾಯಿತ್ತು. ಲಿಂಗವಿದ್ದಂತೆ ಜೀವಿಗಳ ಅಂಗವ ನೋಡಿ ಬದುಕಿಹೆನೆಂಬ ಭಂಡರಿಗೇಕೆ? ಗುಡಿಯ ಗುಮ್ಮಟನಾಥನಲ್ಲಿ ಅಗಮ್ಯೇಶ್ವರಲಿಂಗ ಅವರ ಬಲ್ಲನಾಗಿ ಒಲ್ಲ.