Index   ವಚನ - 51    Search  
 
ಕಾಲೆರಡರಲ್ಲಿ ನಿನ್ನಾಟವೆ? ಕೈಯೆರಡರಲ್ಲಿ ನಿನ್ನ ಬಂಧವೆ? ಮೈಯೊಂದರಲ್ಲಿ ನಿನ್ನ ಭೋಗವೆ? ಬಾಯೊಂದರಲ್ಲಿ ನಿನ್ನ ತೃಪ್ತಿಯೆ? ಅಯಿದರ ಗುಹೆಯೊಳಗೆ ಗುಹೇಶ್ವರನಾದೆ. ಮೂರರ ಗೂಡಿನೊಳಗೆ ಗುಮ್ಮಟನಾದೆ. ಆರರ ಅಂಗವ ಹರಿದು, ಅಗಮ್ಯೇಶ್ವರಲಿಂಗವಾದೆ. ಮೀರಿ ಕಾಬುದೇನು ಹೇಳಿರಣ್ಣಾ?