ಗುಡಿಯೊಡೆಯಂಗೆ ಕಂಬವೊಂದು, ಬಿಗಿಮೊಳೆಯೆಂಟು,
ಕಂಬಕ್ಕೆ ಕಟ್ಟಿದ ಆಧಾರ ದಾರವೈದು,
ಗುಡಿಯ ಸಂದು ಹದಿನಾರು.
ಕೂಟದ ಸಂಪಿನ ಪಟ್ಟಿ ಇಪ್ಪತ್ತೈದು, ಒಂಬತ್ತು ಬಾಗಿಲು,
ಮುಗಿಯಿತ್ತು ಗುಡಿ.
ಗುಡಿಯ ಮೇಲೆ ಮೂರು ಕಳಸ, ಮೂರಕ್ಕೊಂದೆ ರತ್ನದ ಕುಡಿವೆಳಗು.
ಬೆಳಗಿದ ಪ್ರಜ್ವಲಿತದಿಂದ ಗುಡಿ ಒಡೆಯಿತ್ತು.
ಗುಡಿಯೊಳಗಾದವೆಲ್ಲವು ಅಲ್ಲಿಯೆ ಅಡಗಿತ್ತು.
ಕಳಸದ ಕಳೆ ಹಿಂಗಿತ್ತು, ಮಾಣಿಕದ ಬೆಳಗಿನಲ್ಲಿ.
ಆ ಬೆಳಗಡಗಿತ್ತು, ಅಗಮ್ಯೇಶ್ವರಲಿಂಗದಲ್ಲಿ ಒಡಗೂಡಿತ್ತು.
Art
Manuscript
Music
Courtesy:
Transliteration
Guḍiyoḍeyaṅge kambavondu, bigimoḷeyeṇṭu,
kambakke kaṭṭida ādhāra dāravaidu,
guḍiya sandu hadināru.
Kūṭada sampina paṭṭi ippattaidu, ombattu bāgilu,
mugiyittu guḍi.
Guḍiya mēle mūru kaḷasa, mūrakkonde ratnada kuḍiveḷagu.
Beḷagida prajvalitadinda guḍi oḍeyittu.
Guḍiyoḷagādavellavu alliye aḍagittu.
Kaḷasada kaḷe hiṅgittu, māṇikada beḷaginalli.
Ā beḷagaḍagittu, agamyēśvaraliṅgadalli oḍagūḍittu.