Index   ವಚನ - 68    Search  
 
ಪ್ರಾಣ ತುಡುಕಿಗೆ ಬಂದಲ್ಲಿ, ಕೊರಳ ಹಿಡಿದು ಅವುಕಿ ಕೊಂದರೆಂಬ ಅಪಕೀರ್ತಿಯೇಕೆ? ಬೀಳುವ ಪಾದುಕವ ತಳ್ಳಿ ಘನವ ಹೊರಲೇಕೆ? ಬೇವ ಮನೆಗೆ ಕೊಳ್ಳಿಯ ಹಾಕಿ ದುರ್ಜನವ ಹೊರುವನಂತೆ, ಅರಿಯದವನ ಅರಿಯರೆಂದು ಬಿರುದು ಮಾಡುವನ ಅರಿವು, ಹರಿ[ದ] ಹರುಗೋಲವನೇರಿದಂತೆ, ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗಾ.