Index   ವಚನ - 67    Search  
 
ಇದಿರು ನೋಡುವುದಕ್ಕೆ ತೊಲಗು ಸಾಯೆಂಬ ಮಾತಲ್ಲದೆ, ನಿಂದಲ್ಲಿ ಅಂಬರವ ನೋಡುವುದಕ್ಕೆ ಕೊಂಡಾಡಲೇತಕ್ಕೆ? ವಾದದಿಂದ ಹೋರಿ ಕಾಬುದು, ವೇದಾಂತಿಯ ವಾಗ್ವಾದದ ಗೆಲ್ಲ ಸೋಲವಲ್ಲದೆ, ವಸ್ತುವ ಭೇದಿಸಲರಿಯ, ಅರಿದುದಕ್ಕೆ ಒಡಲು. ಅವರಡಿಯ ಅರಿದ ಮತ್ತೆ, ಏನೂ ಎನ್ನದಿಪ್ಪುದೆ ವೇದಸಿದ್ಧಾಂತ. ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗವನರಿವುದಕ್ಕೆ ಇದೇ ಪ್ರಮಾಣು.