Index   ವಚನ - 74    Search  
 
ಘಟದಲ್ಲಿ ಆತ್ಮ ದಿಟಕರಿಸುವುದಿಲ್ಲವೆಂದು ಅರಿದ ಮತ್ತೆ, ಕುಟಿಲದ ರಸವಾದದ ಮಾತಿನ ಮಾಲೆಯೇಕೆ? ಆಗುಚೇಗೆಯನರಿದು ಬೋಧಿಸಲೇಕೆ, ಭೋಗಂಗಳಿಗಾಗಿ? ಇದು ಮರುತನ ಇದಿರಿನ ದೀಪ, ಸುರಚಾಪದ ಬಣ್ಣ, ಶರೀರದ ಅಳಿವು. ಸಾಕಾರದಲ್ಲಿ ಇದ್ದು, ನಿರಾಕಾರವನರಿ, ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗವ.