ಸಂಸಾರದಲ್ಲಿ ತೋರುವ ಸುಖದುಃಖಭೋಗಾದಿಭೋಗಂಗಳು
ಇವಾರಿಂದಾದವೆಂದು ಅರಿದ ಮತ್ತೆ, ಬಾಗಿಲ ಕಾಯ್ದು ಕೂಗಿಡಲೇಕೆ?
ಎಲೆ ಅಲ್ಲಾಡದು, ಅವನಾಧೀನವಲ್ಲದಿಲ್ಲಾ ಎಂದು
ಎಲ್ಲರಿಗೆ ಹೇಳುತ ಭವಬಡಲೇಕೆ?
ಹೋಯಿತ್ತು ಬಾಗಿಲಿಗೆ ಬಂದಾಗ ಭಾವಜ್ಞಾನ.
ಭಾವ ಗುಡಿಯೊಡೆಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗದಲ್ಲಿ
ಅರಿದು, ಹರಿದು ಬದುಕಿರಣ್ಣಾ.
Art
Manuscript
Music
Courtesy:
Transliteration
Sansāradalli tōruva sukhaduḥkhabhōgādibhōgaṅgaḷu
ivārindādavendu arida matte, bāgila kāydu kūgiḍalēke?
Ele allāḍadu, avanādhīnavalladillā endu
ellarige hēḷuta bhavabaḍalēke?
Hōyittu bāgilige bandāga bhāvajñāna.
Bhāva guḍiyoḍeya gum'maṭanāthana agamyēśvaraliṅgadalli
aridu, haridu badukiraṇṇā.