Index   ವಚನ - 78    Search  
 
ರೂಪ ಕಂಡಲ್ಲಿ ಇಷ್ಟಕ್ಕೆ, ರುಚಿಯ ಕಂಡಲ್ಲಿ ಪ್ರಾಣಕ್ಕೆ, ಉಭಯವ ಹೆರೆಹಿಂಗಿ, ಅರ್ಪಿತವನರಿವ ಪರಿಯಿನ್ನೆಂತೊ? ಕುಸುಮ ಗಂಧದ ಇರವು, ಫಳರಸದಿರವು ಇಷ್ಟಪ್ರಾಣ. ಇಷ್ಟವನರಿತಡೆ ಅರ್ಪಿತ ಅವಧಾನಿ. ಗುಡಿಯ ಗುಮ್ಮಟನಾಥನ ಅಗಮ್ಯೇಶ್ವರಲಿಂಗದಲ್ಲಿ ಅರ್ಪಿತ ಅವಧಾನಿ[ಯ] ಇರವು.