Index   ವಚನ - 83    Search  
 
ಒಂದು ಚಿಪ್ಪಿನಲ್ಲಿ, ಮೂರು ಮುತ್ತು ಹುಟ್ಟಿದವು: ಒಂದು ಕಟ್ಟಾಣಿ, ಒಂದು ಸುಪ್ಪಾಣಿ, ಒಂದು ಮಣಿ ಉದಕವಿಲ್ಲದ ಸೂತೆ. ಬಿದ್ದ ಉದಕ ಒಂದೆ, ತಾಳಿದ ಚಿಪ್ಪು ಒಂದೆ. ಚಿಪ್ಪಿನ ಹೊರೆಯೋ, ಉದಕವ ತೆರೆಯೋ, ಮುತ್ತಿನ ಗುಣವೋ? ಇವರ ಲಕ್ಷಣದ ಭೇದವೋ ಇದು? ಚಿತ್ತದ ಜ್ಞಾನ, ಕರ್ತುವೆ ಹೇಳಾ, ಗುಡಿಯ ಗುಹೆಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.