Index   ವಚನ - 85    Search  
 
ಒಂದು ಉಪ್ಪರಿಗೆಯ ಮಂದಿರದಲ್ಲಿ, ಉಭಯದ ಮಧ್ಯದ ಬಾಗಿಲಲ್ಲಿ, ಕಟ್ಟಿದ್ದಿತ್ತೊಂದು ಬಲುಗೋಡಗಕ್ಕೆ ಬಾಯ ಅಣಲಿನ ಸಂಚದ ಕೂಳು. ಉಡಿಯೊಳಗಣ ಬೆಂಬೆಯ ಹಂಬು, ಹಂಬಿನೊಳಗಣ ಬಹುಧಾನ್ಯದ ತೆನೆ, ನೆಟ್ಟ ಗಳೆ ಮೂರು, ತಿಪ್ಪಣದ ಮಣೆ ಒಂದು, ಮಣೆಯಲ್ಲಿ ಕುಳಿತು ಅಣಲ ಸಂಚವ ತಿಂದಿತ್ತು. ಒಂದು ಮಣೆಯಲ್ಲಿ ಕುಳಿತು ಉಡಿಯ ತೆನೆಯ ತಿಂದಿತ್ತು. ಮತ್ತೊಂದು ಮಣೆಗೆ ಹೋಗಿ, ಕುಳಿತು ಹಾರೈಸಿ ದೆಸೆಯ ಕಾಣದೆ ನೆಗೆಯಲಾಗಿ, ಗಣೆ ದಸಿ ತಾಗಿ, ಕೋಡಗನ ಅಸು ಹೋಯಿತ್ತು, ಗುಡಿಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗವನರಿದೆ.