Index   ವಚನ - 88    Search  
 
ಅರಿದವನ ವಿಶ್ವಾಸ, ತೊರೆಯ ಗುಂಡಿಗೆಯಿಂದ ಕಡೆಯೆ? ಪಿಸಿತದ ಕುಕ್ಕೆಯ ಮೆಚ್ಚಿ, ವಿಷವ ಪೊಯ್ದುದರಿಂದ ಕಡೆಯೆ, ಒಸೆದು ಕೊಟ್ಟ ಲಿಂಗ? ವಿಷರುಹನ ಜನಕನ ಪಿತ ಮೊದಲಾದ ಮನುಮುನಿದೇವಜಾತಿ ವರ್ಗಂಗಳೆಲ್ಲ ಶ್ರದ್ಧೆಯಿಂದ ಸದಾತ್ಮನನರಿದು, ಸದಮಲ ಸುಧೆಯಲ್ಲಿ ಸುಖಿಯಾದರೆಂಬುದ ಕಂಡು ಕೇಳಿ, ನಂಬುಗೆಯಿಲ್ಲದೆ ಕೊಡುವನ ಮರವೆಯೋ, ಕೊಂಬುವನ ಪ್ರಕೃತಿಯೋ? ಇದರ ಸಂದೇಹವ ಹೇಳು, ಗುಡಿಯ ಗುಹೆಯೊಳಗೆ ಅಡಗಬೇಡ, ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ.