Index   ವಚನ - 92    Search  
 
ಕಣ್ಣಿನಲ್ಲಿ ಕಂಡೆಹೆನೆಂದಡೆ, ಕಣ್ಣು ಎನ್ನವಲ್ಲ. ಕೈಯಲ್ಲಿ ಮುಟ್ಟಿಹೆನೆಂದಡೆ, ಕೈಯೆನ್ನವಲ್ಲ. ಮನದಲ್ಲಿ ನೆನೆದೆಹೆನೆಂದಡೆ, ಮನ ಎನ್ನದಲ್ಲ. ನಾ ನಡೆವಡೆ ಸ್ವತಂತ್ರಿಯಲ್ಲ. ಎನಗೆ ಅರಿಕೆಯಾದಡೆ ನಿನ್ನ ಇದಿರಿಡಲೇಕೆ? ಇದಿರಿಂಗೆ ಕುರುಹು, ಮನಕ್ಕೆ ಅರುವು, ಉಭಯದ ತೆರ ನೀನೆ. ಗೂಡಿನ ಗುಹೆಯ ಗುಮ್ಮಟನೊಡೆಯ ಅಗಮ್ಯೇಶ್ವರಲಿಂಗ, ಒಳಹೊರಗಿನಲ್ಲಿ ಪರಿಪೂರ್ಣ ನೀನು ನೀನೆ.