Index   ವಚನ - 94    Search  
 
ಆತುರ ಹಿಂಗದವಂಗೆ ವೇಶೆಯ ಪೋಷಿಸಲೇಕೆ? ಈಶ್ವರನನರಿಯದವಂಗೆ ಸುಕೃತದ ಪೂಜೆಯ ಪುಣ್ಯವದೇಕೆ? ಹೇಳಿ ಹೊಕ್ಕು ಹೋದ ಮತ್ತೆ ವೇಷದ ಒಲವರವೇಕೆ? ಭವವಿರೋಧಿಯ ಭಾವದಲ್ಲಿ ನೆಲಸಿದ ಮತ್ತೆ, ಇದಿರಿಂಗೆ ಸಂಪದಪದವೇಕೆ? ಒಡಗೂಡಿದಲ್ಲಿ ಅಂಗದ ತೊಡಕೇಕೆ? ಬಿಡು, ಶುಕ್ಲದ ಗುಡಿಯ ಸುಡು. ಗುಮ್ಮಟನೆಂಬ ನಾಮವ ಅಡಗು, ಅಗಮ್ಯೇಶ್ವರಲಿಂಗದಲ್ಲಿ ಗುಪ್ತನಾಗಿ, ಒಡಗೂಡಿ ಲೇಪಾಂಗವಾಗಿರು.