ಒಂದು ವರ್ಣದಿಂದ, ಭೇದಕ್ರಮದಿಂದ ಕೂಡಲಾಗಿ,
ಪಂಚವರ್ಣವಾಯಿತ್ತು.
ಶ್ವೇತವರ್ಣ ಮೊದಲು ಪರಿಕ್ರಮದಿಂದ
ಷಡುವರ್ಣವಾಯಿತ್ತು.
ಆ ವರ್ಣದ ಭೇದ ಬಿಳುಹಿನ ಸ್ವಾಯತ್ತೆಯಲ್ಲಡಗಿತ್ತು.
ಇಂತೀ ಪರಮನಿಂದ ಇಂದ್ರಿಯ ವಿಕಾರವಾದುದನರಿಯದೆ,
ಆತ್ಮಂಗೆ ಪರಿಭ್ರಮಣವೆಂದು ಸಂದೇಹವ ಮಾಡುವ
ಬಂಧಮೋಕ್ಷಕರ್ಮಂಗಳಿಗೆ ಪರಮನಿಂದ ಹರಿದಲ್ಲದೆ,
ಊರ್ಧ್ವರೇತೋಮೂರ್ತಿ ಶ್ವೇತಸ್ವಯಂಭು
ಕಪಿಲೇಶ್ವರಲಿಂಗವು ಸಾಧ್ಯವಲ್ಲ.
Art
Manuscript
Music
Courtesy:
Transliteration
Ondu varṇadinda, bhēdakramadinda kūḍalāgi,
pan̄cavarṇavāyittu.
Śvētavarṇa modalu parikramadinda
ṣaḍuvarṇavāyittu.
Ā varṇada bhēda biḷuhina svāyatteyallaḍagittu.
Intī paramaninda indriya vikāravādudanariyade,
ātmaṅge paribhramaṇavendu sandēhava māḍuva
bandhamōkṣakarmaṅgaḷige paramaninda haridallade,
ūrdhvarētōmūrti śvētasvayambhu
kapilēśvaraliṅgavu sādhyavalla.