Index   ವಚನ - 4    Search  
 
ಗಜಕರ್ಣದಂತೆ, ಇಂದ್ರಮಹೇಂದ್ರಜಾಲದಂತೆ, ಅಗ್ನಿಸ್ತಂಭನೆಯಂತೆ, ಬಿಲ್ಲುವಿದ್ಯೆಯಂತೆ, ಜಲಸೂತ್ರದಂತೆ, ರಣಕ್ಕೆ ತೊಲಗದ ಪಟುಭಟನಂತೆ. ಇಂತೀ ಸರ್ವಾಂಗಲಿಂಗಿಯಾದ ಪರಿಪೂರ್ಣಭಕ್ತಜಂಗಮಕ್ಕೆ ಇಂತಿವನರಿವ ಭೃತ್ಯಕುಲಕ್ಕೆ ತ್ರಿಸಂಧ್ಯಾಕಾಲ ಶರಣೆಂದು, ಎನ್ನ ಮುಕ್ತನ ಮಾಡು, ನಿನ್ನ ಧರ್ಮ, ಊರ್ಧ್ವರೇತೋಮೂರ್ತಿ ಶ್ವೇತಸ್ವಯಂಭು ಕಪಿಲೇಶ್ವರಲಿಂಗಾ.