Index   ವಚನ - 7    Search  
 
ಧನ ಜವ್ವನವುಳ್ಳಲ್ಲಿ ಶಿವಶರಣೆಂಬೆ. ಮಾನವಾ, ನೆನೆ ನೆನೆಯೋ, ನೀ ಕೆಡದ ಮುನ್ನ. ಧನ ನಿಲ್ಲದು, ಜವ್ವನ ನಿಲ್ಲದು, ನಿನ್ನ ಪ್ರಾಣ ನಿಲ್ಲದು. ಇದನರಿದು, ಶ್ರೀಮಲ್ಲಿಕಾರ್ಜುನನ ನೆನೆಯೋ, ನೀ ಕೆಡದ ಮುನ್ನ.