Index   ವಚನ - 8    Search  
 
ಧೃತಿಗೆಟ್ಟು ದೈವವೆಂಬಿರಲ್ಲಯ್ಯಾ. ಧೃತಿಗೆಟ್ಟು ದೈವವ ಪೂಜಿಸುವಿರಲ್ಲಯ್ಯಾ. ಧೃತಿಗೆಟ್ಟು ದೈವಂಗಳ ಬೇಡುವಿರಲ್ಲಯ್ಯಾ. ಗತಿಯಲ್ಲ, ದುರ್ಗತಿಯ ಮಾನವರಿರಾ ದಿಟದಿಟ, ಅಲ್ಲಿ ಬೇಡದಿರಿರೆ. ಶ್ರುತಿ ಸ್ಮೃತಿಗಳ ಕೇಳಿ, ಅವೂ ಕೊಡಲರಿಯವೆಂಬುದ ನೆರೆನಂಬಿರೆ, ನಮ್ಮ ಶ್ರೀಮಲ್ಲಿಕಾರ್ಜುನ ಕೊಡುವನು.