Index   ವಚನ - 102    Search  
 
ಕಾಲ ಸಡಗರ ಕೈಯಲದೆ, ಕೈಯ ಸಡಗರ ಕಂಗಳಲ್ಲದೆ. ಅದೇನು ಕಾರಣವೆಂದಡೆ, ಕಂಗಳೇ ಕಾರಣವಾಗಿ, ಒಂದು ಮಾತಿನೊಳಗೆ ವಿಚಾರವದೆ; ಕನ್ನಡಿಯೊಳಗೆ ಕಾರ್ಯವದೆ, ಇದೇನು ಕಾರಣ ತಿಳಿಯಲರಿಯರು ಹೇಳಾ, ಗುಹೇಶ್ವರಾ?