ಮನ ಬಸಿರಾದಡೆ ಕೈ ಬೆಸಲಾಯಿತ್ತ ಕಂಡೆ!
ಕರ್ಪುರದ ಕಂಪ ಕಿವಿ ಕುಡಿಯಿತ್ತ ಕಂಡೆ!
ಮುತ್ತಿನ ಢಾಳವ ಮೂಗು ನುಂಗಿತ್ತ ಕಂಡೆ!
ಕಂಗಳು ಹಸಿದು ವಜ್ರವ ನುಂಗಿತ್ತ ಕಂಡೆ!
ಒಂದು ನೀಲದೊಳಗೆ ಮೂರುಲೋಕವಡಗಿತ್ತ ಕಂಡೆ,
ಗುಹೇಶ್ವರಾ,
Transliteration Mana basirādaḍe kai besalāyitta kaṇḍe!
Karpurada kampa kivi kuḍiyitta kaṇḍe!
Muttina ḍhāḷava mūgu nuṅgitta kaṇḍe!
Kaṅgaḷu hasidu vajrava nuṅgitta kaṇḍe!
Ondu nīladoḷage mūrulōkavaḍagitta kaṇḍe,
guhēśvarā,
English Translation 2 I saw:
heart conceive,
hand grow big with child;
ear drink up the smell
of camphor, nose eat up
the dazzle of pearls;
hungry eyes devour
diamonds.
In a blue sapphire
I saw the three worlds
hiding,
O Lord of Caves.
Translated by: A K Ramanujan
Book Name: Speaking Of Siva
Publisher: Penguin Books
---------------------
Hindi Translation मन गर्भ हुआ तो कर में प्रसव हुआ देखो।
कपूर का सुगंध का नमें भरा देखा।
मोती का प्रकाश नाक निगलते देखा।
आंखें भूख से हीरा, निगलते देखा।
एक नील में तीन लोक समाये हुए देखा गुहेश्वरा।
Translated by: Eswara Sharma M and Govindarao B N
Tamil Translation மனம் நிறையின், கையில் தோன்றுவதைக் கண்டேன்.
கற்பூரமணத்தை செவி அருந்தியதைக் கண்டேன்.
முத்து மூக்குத்தியினொளி மூக்கில் நிறைந்ததைக் கண்டேன்.
பசித்த கண்கள் வைரத்தை விழுங்கியதைக் கண்டேன்.
இஷ்டலிங்கத்தில் மூவுலகும் அடங்கியதைக் கண்டேன். குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಒಂದು ನೀಲ = ಈ ಕರಸ್ಥಲದ ಇಷ್ಟಲಿಂಗ, ಆ ಮಹಾಸ್ಥಲದ ಮಹಾಲಿಂಗ; ಬೆಸಲಾಗು = ಹೆರು, ಪ್ರಸವಿಸು; ಮುತ್ತಿನ ಢಾಳ = ಮುತ್ತಿನ ಮೂಗುತಿಯ ಪ್ರಕಾಶ; ವಜ್ರ = ನಿತ್ಯ ಅಭೇದ್ಯವಾದ ಲಿಂಗ; ಹಸಿದು = ಆತುರತೆ;
Written by: Sri Siddeswara Swamiji, Vijayapura