Index   ವಚನ - 1029    Search  
 
ಕಂಗಳೊಳಗಣ ಕಟ್ಟಗೆಯ ಮುರಿಯದ, ಕೈಯೊಳಗಣ ಕಪ್ಪರವನೊಡೆಯದ, ತನ್ನೊಳಗಿಪ್ಪ ನಿಕ್ಷೇಪವ ಭೇದಿಸಿ ಕಾಣಲರಿಯದ ಬಿನುಗರೆಲ್ಲ, ಹಲುಗಿರಿವುತ್ತಿಹರು ಕಾಣಾ ಗುಹೇಶ್ವರಾ.