•  
  •  
  •  
  •  
Index   ವಚನ - 1033    Search  
 
ಕಂಡೆಯಾ ಬಸವಣ್ಣಾ, ಕಣ್ಣಿನೊಳಗಣ ಬೊಂಬೆಯ ಸೂತ್ರದ ಇರವಿನಂತೆ, ಕುಂದಣದೊಳಗಡೆಗೆ ತೋರುವ ಮೃದು ಛಾಯದಂತೆ, ನವನೀತದೊಳಗಡಗಿದ ಸಾರದ ಸವಿಯಂತೆ, ಅಂಗವಿಲ್ಲದ ಕುರುಹು, ಭಾವವಿಲ್ಲದ ಬಯಲು, ಬೆಳಗನರಿಯದ ಜ್ಯೋತಿಯ ಕಂಡೆಯಾ ಸಂಗನಬಸವಣ್ಣಾ, ಗುಹೇಶ್ವರಲಿಂಗದಲ್ಲಿ ಮರುಳು ಶಂಕರದೇವರ?
Transliteration Kaṇḍeyā basavaṇṇā, kaṇṇinoḷagaṇa bombeya sūtrada iravinante, kundaṇadoḷagaḍege tōruva mr̥du chāyadante, navanītadoḷagaḍagida sārada saviyante, aṅgavillada kuruhu, bhāvavillada bayalu, beḷaganariyada jyōtiya kaṇḍeyā saṅganabasavaṇṇā, guhēśvaraliṅgadalli maruḷu śaṅkaradēvara?
Hindi Translation देखा बसवण्ण, आँखों में ही आली के सूत्र रहे जैसे, आभरण के अंदर दिखायी मृदु छाया जैसी, नवनीत के अंदर रहे सार का स्वाद जैसा बिना अंग पहचान, बिना भाव शून्य, बिना प्रकाश की ज्योति देख संगनबसवण्णा। गुहेश्वर लिंग में मरुळशंकरदेव ? Translated by: Eswara Sharma M and Govindarao B N