Index   ವಚನ - 1032    Search  
 
ಕಂಡೆನೆಂಬುದು ಕಂಗಳ ಮರವೆ, ಕಾಣೆನೆಂಬುದು ಮನದ ಮರವೆ, ಕೂಡಿದೆನೆಂಬುದು ಅರುಹಿನ ಮರವೆ, ಅಗಲಿದೆನೆಂಬುದು ಮರಹಿನ ಮರವೆ. ಇಂತು, ಕಂಡೆ-ಕಾಣೆ, ಕೂಡಿದೆ-ಅಗಲಿದೆ ಎಂಬ, ಭ್ರಾಂತಿಸೂತಕವಳಿದು ನೋಡಲು ಗುಹೇಶ್ವರಲಿಂಗವನಗಲಲೆಡೆಯಿಲ್ಲ ಕೇಳಾ, ಎಲೆ ತಾಯೆ.