•  
  •  
  •  
  •  
Index   ವಚನ - 1051    Search  
 
ಕರಸ್ಥಲದ ಲಿಂಗವೆ ಕಾಯಕ್ಕೆ ವೇಧಿಸಿದಲ್ಲಿ, ಕಾಯ ಲಿಂಗವಾಯಿತ್ತು. ಅಂತಾದ ಮಹಾಘನಲಿಂಗವೆ ಪ್ರಾಣಕ್ಕೆ ವೇಧಿಸಿದಲ್ಲಿ ಪ್ರಾಣ ಲಿಂಗವಾಯಿತ್ತು, ಅಂತಾದ ಮಹಾಘನಲಿಂಗವೆ ಭಾವಕ್ಕೆ ವೇಧಿಸಿದಲ್ಲಿ ಭಾವ ಲಿಂಗವಾಯಿತ್ತು. ಅಂತಾದ ಮಹಾಘನಲಿಂಗವೆ ಜ್ಞಾನಕ್ಕೆ ವೇಧಿಸಿದಲ್ಲಿ ಜ್ಞಾನ ಲಿಂಗವಾಯಿತ್ತು. ಅಂತಾದ ಕಾರಣ-ನಮ್ಮ ಗುಹೇಶ್ವರನ ಶರಣಂಗೆ, ಅರಿವರತು ಕುರುಹು ನಿಷ್ಪತಿಯಾಗಿ, ತಾನೆಂಬ ಭಾವವು ಉರಿಯುಂಡ ಕರ್ಪುರದಂತಾಯಿತ್ತು!
Transliteration Karasthalada liṅgave kāyakke vēdhisidalli, kāya liṅgavāyittu. Antāda mahāghanaliṅgave prāṇakke vēdhisidalli prāṇa liṅgavāyittu, antāda mahāghanaliṅgave bhāvakke vēdhisidalli bhāva liṅgavāyittu. Antāda mahāghanaliṅgave jñānakke vēdhisidalli jñāna liṅgavāyittu. Antāda kāraṇa-nam'ma guhēśvarana śaraṇaṅge, arivaratu kuruhu niṣpatiyāgi, tānemba bhāvavu uriyuṇḍa karpuradantāyittu!
Hindi Translation करस्थल लिंग ही शरीर में लगे तो, शरीर लिंग हुआ था। ऐसे महा घनलिंग ही प्राण में लगे तो, प्राणलिंग हुआ था। ऐसे महा घनलिंगही भाव में लगे तो भावलिंग हुआ था। ऐसे महा घनलिंग के ज्ञान में लगे तो ज्ञानलिंग हुआ था। ऐसे कारण - हमारे गुहेश्वर के शरण को, ज्ञान आकर चिह्न निष्पत्ती होकर, मैं जैसा भाव आग लगे कपूर वैसा हुआ था। Translated by: Eswara Sharma M and Govindarao B N